ಕನ್ನಡ ವ್ಯಾಕರಣ ನಾಮಪದಗಳು | Kannada Vyakarana | Kannada Grammar | FDA SDA Kannada Grammar Namapadagalu

Stunning Moms
Stunning Moms
116.2 هزار بار بازدید - 4 سال پیش - Namapada means Nama = Name
Namapada means Nama = Name , Pada = word,. It is termed in Emglish as Noun. The definition of Noun is the name of a person, place , animal or thing. The same thing implies Namapada in Kannada.


#ಕನ್ನಡವ್ಯಾಕರಣ   #KannadaVyakarana #KannadaGrammar #ನಾಮಪದ

ನಾವು ಮಾತನಾಡುವ ಮಾತುಗಳಲ್ಲಿ ಅನೇಕ ಬಗೆಯ ಶಬ್ದಗಳಿರುತ್ತವೆ. ಆ ಶಬ್ದಗಳಿಗೆ
ನಾವು ಬೇರೆ ಬೇರೆ ಹೆಸರು ಕೊಟ್ಟಿರುತ್ತೇವೆ. ಅಂದರೆ ಒಂದೊಂದು ಜಾತೀಯ ಶಬ್ದಗಳನ್ನು
ಒಂದೊಂದು ಗುಂಪು ಮಾಡಿ ವ್ಯಾಕರಣದಲ್ಲಿ ಹೇಳುತ್ತೇವೆ. ಉದಾಹರಣೆಗೆ ಈ ಕೆಳಗಿನ
ಮಾತುಗಳಲ್ಲಿಯ ಶಬ್ದಗಳನ್ನು ನೋಡಿರಿ.

1. ಆತನು ಮನೆಯನ್ನು ಚೆನ್ನಾಗಿ ಕಟ್ಟಿದನು.
2. ಒಕ್ಕಲಿಗರು ಕಷ್ಟದಿಂದ ಬೆಳೆಯನ್ನು ಬೆಳೆಯುವರು.

ಈ ವಾಕ್ಯಗಳಲ್ಲಿ:
1. ಆತನು, ಮನೆಯನ್ನು, ಒಕ್ಕಲಿಗರು, ಕಷ್ಟದಿಂದ, ಬೆಳೆಯನ್ನು-ಇವೆಲ್ಲ ನಾಮಪದಗಳು.
2. ಕಟ್ಟಿದನು, ಬೆಳೆಯುವರು-ಇವು ಕ್ರಿಯಾಪದಗಳು.
3. ಚೆನ್ನಾಗಿ-ಎಂಬುದು ಅವ್ಯಯ.

ಹೀಗೆ ನಾವು ಆಡುವ ಮಾತುಗಳನ್ನು ಮುಖ್ಯವಾಗಿ ಮೂರು ಗುಂಪುಗಳಾಗಿ ಮಾಡುತ್ತೇವೆ.
(೧) ನಾಮಪದ (೨) ಕ್ರಿಯಾಪದ (೩) ಅವ್ಯಯ-ಇವೇ ಆ ಮೂರು ಗುಂಪುಗಳು.

ಮನೆಯನ್ನು ಮನೆಯದೆಸೆಯಿಂದ
ಮನೆಯಿಂದ ಮನೆಯ
ಮನೆಗೆ. ಮನೆಯಲ್ಲಿ

ಇವೆಲ್ಲ 'ನಾಮಪದ'ಗಳು. ಈ ಪದಗಳಲ್ಲೆಲ್ಲ 'ಮನೆ' ಎಂಬುದು ಮೂಲರೂಪ.
4 سال پیش در تاریخ 1399/08/19 منتشر شده است.
116,212 بـار بازدید شده
... بیشتر