Kannada Words | Kannada Yogavahagalu | Kannada Simple Words Tricks | ಕನ್ನಡ ಅನುಸ್ವಾರ(ಸೊನ್ನೆ) ಪದಗಳು

Stunning Moms
Stunning Moms
46.9 هزار بار بازدید - 4 سال پیش - ಯೋಗವಾಹಕಗಳು:(ಒಟ್ಟು-2) - ಸ್ವತಂತ್ರವಾದ ಉಚ್ಚಾರಣೆಯನ್ನು ಹೊಂದಿಲ್ಲದ
ಯೋಗವಾಹಕಗಳು:(ಒಟ್ಟು-2) - ಸ್ವತಂತ್ರವಾದ ಉಚ್ಚಾರಣೆಯನ್ನು ಹೊಂದಿಲ್ಲದ ಹಾಗೂ ಸ್ವರ ಅಥವಾ ವ್ಯಂಜನಗಳ ಸಹಾಯದಿಂದ ಮಾತ್ರ ಉಚ್ಛರಿಸಲ್ಪಡುವ ಅಕ್ಷರಗಳನ್ನು 'ಯೋಗವಾಹಕಗಳು' ಎಂದು ಕರೆಯಲಾಗುತ್ತದೆ.
ಯೋಗವಾಹ (ಂ, ಃ) ಗಳನ್ನು ಪ್ರತ್ಯೇಕವಾಗಿ (ಸ್ವತಃ) ಉಚ್ಚಾರ ಮಾಡಲಾಗುವುದಿಲ್ಲ. ಇನ್ನೊಂದು ಅಕ್ಷರದ ಸಂಬಂಧವನ್ನು ಇವು ಹೊಂದಿದಾಗಲೇ ಉಚ್ಚಾರ ಮಾಡಲು ಬರುತ್ತವೆ. ಯೋಗ ಎಂದರೆ ಸಂಬಂಧವನ್ನು, ವಾಹ ಎಂದರೆ ಹೊಂದಿದ, ಎಂದು ಅರ್ಥ. ಆದ್ದರಿಂದ ಒಂದು ಅಕ್ಷರದ ಸಂಬಂಧವನ್ನು ಹೊಂದಿದ ಮೇಲೆಯೇ ಉಚ್ಚಾರ ಮಾಡಲು ಬರುವ ಇವಕ್ಕೆ ಯೋಗವಾಹಗಳೆಂಬ ಹೆಸರು ಬಂದಿದೆ. ಮುಖ್ಯವಾಗಿ ಇವು ಸ್ವರದ ಸಂಬಂಧ ಪಡೆದ ಮೇಲೆ ಎಂದರೆ ಸ್ವರಾಕ್ಷರಗಳ ಮುಂದೆ ಬಂದಾಗ ಉಚ್ಚಾರವಾಗುತ್ತವೆ. ಅಂ, ಇಂ, ಎಂ, ಒಂ, ಓಂ, ಅಃ, ಇಃ, ಉಃ,__ ಹೀಗೆ ಇವನ್ನು ಸ್ವರದ ಸಂಬಂಧದಿಂದಲೇ ಉಚ್ಚರಿಸಬಹುದಲ್ಲದೆ, ಅದಿಲ್ಲದೆಯೇ ಂ ಃ ಹೀಗೆ ಯಾವ ಅಕ್ಷರ ಸಂಬಂಧವಿಲ್ಲದೆ ಬರೆದರೆ, ಉಚ್ಚಾರಮಾಡಲು ಬರುವುದೇ ಇಲ್ಲ.

   ಅಂ ಮತ್ತು ಅಃ  ಇವುಗಳನ್ನು ಕ್ರಮವಾಗಿ 'ಅನುಸ್ವರ' ಮತ್ತು 'ವಿಸರ್ಗ' ಎಂದು ಕರೆಯಲಾಗುತ್ತದೆ.
1) ಅನುಸ್ವಾರ:- (ಅಂ) - ಇಲ್ಲಿ 'ಅ' ಅಕ್ಷರದ ಜೊತೆಯಲ್ಲಿರುವ '0' ಮಾತ್ರ ಅನುಸ್ವರವಾಗಿದೆ.

“ಯಾವುದೇ ಅಕ್ಷರವು ಒಂದು ಸೊನ್ನೆ(ಂ) ಬಿಂದು, ಎಂಬ ಸಂಕೇತವನ್ನು ಹೊಂದಿದ್ದರೆ ಅದು ಅನುಸ್ವಾರಾಕ್ಷರ ಎನಿಸುವುದು”,

ಉದಾ: ಅಂಕ, ಒಂದು, ಎಂಬ

2) ವಿಸರ್ಗ:- (ಅಃ) - ಇಲ್ಲಿ 'ಅ' ಅಕ್ಷರದ ಜೊತೆಯಲ್ಲಿರುವ ಎರಡು ಸೊನ್ನೆಗಳ ಸಂಕೇತ ಮಾತ್ರ ವಿಸರ್ಗವಾಗಿದೆ.
“ಯಾವುದೇ ಅಕ್ಷರವು ಬಿಂದು ಸಮೇತ ಅಂದರೆ ಒಂದರ ಮೇಲೊಂದು ಇರುವ ಎರಡು ಸೊನ್ನೆಗಳ ಸಂಕೇತವನ್ನು ಹೊಂದಿದ್ದರೆ ಅದು ವಿಸರ್ಗಾಕ್ಷರ ಎನಿಸುವುದು”

ಉದಾ: ಅಂತಃ, ದುಃಖ, ಸಃ, ನಃ

[ಯೋಗ ಎಂಬುದು ಯುಜ್ ಅಂದರೆ ಕೂಡು ಎಂದೂ, ವಾಹ ಇದು ವಹ್ ಎಂಬ ಧಾತುವಿನಿಂದ ಹುಟ್ಟಿ ಕೂಡಿಹೋಗು ಎಂಬ ಅರ್ಥವನ್ನೂ ಕೊಡುತ್ತವೆ.  ಆದ್ದರಿಂದ ಯೋಗವಾಹವೆಂದರೆ, ಯಾವುದಾದರೊಂದು ಅಕ್ಷರ ಸಂಬಂಧವಿಲ್ಲದೆ ಉಚ್ಚರಿಸಲಾಗದ ಅಕ್ಷರವೆಂದು ತಿಳಿಯಬೇಕು.]

ಈ ಐದು ಅನುನಾಸಿಕಾಕ್ಷರಗಳು ಆಯಾ ವರ್ಗದ  ಅಕ್ಷರಗಳ ಹಿಂದೆ ನಿಂತು ಬಿಂದು (ಅನುಸ್ವಾರ) ವಾಗಿ  ಕಾರ್ಯನಿರ್ವಹಿಸುತ್ತವೆ.  
ಉದಾ:- 'ಕ' ವರ್ಗದಲ್ಲಿ :- ಅಙ್ಗಳ = ಅಂಗಳ,  ಪಙ್ಕಜ = ಪಂಕಜ,  ಸಙ್ಘ = ಸಂಘ
            'ಚ' ವರ್ಗದಲ್ಲಿ:- ಅಞ್ಚೆ = ಅಂಚೆ,  ಪಞ್ಜರ = ಪಂಜರ,  ಇಞ್ಚರ = ಇಂಚರ
            'ಟ' ವರ್ಗದಲ್ಲಿ:- ಗಣ್ಟೆ = ಗಂಟೆ,  ಹಿಣ್ಡು = ಹಿಂಡು,  ಅಣ್ಟು = ಅಂಟು
            'ತ' ವರ್ಗದಲ್ಲಿ:- ಸನ್ತಸ = ಸಂತಸ, ಆನನ್ದ = ಆನಂದ, ಬನ್ಧನ = ಬಂಧನ

            'ಪ' ವರ್ಗದಲ್ಲಿ:- ಪಮ್ಪ = ಪಂಪ,  ತಮ್ಬಾಕು = ತಂಬಾಕು,  ಶಮ್ಭು = ಶಂಭು,

In this video we will be learning #KannadaWords #KannadaTwoLetterWords #KannadaAlphabets
4 سال پیش در تاریخ 1399/07/08 منتشر شده است.
46,928 بـار بازدید شده
... بیشتر