Eesha ninna charana bhajane (Keshava Nama) | Dasara padagalu | Shilpa Sunil Saai Arathy Ravikumar

SHILPA SWARA
SHILPA SWARA
21.1 هزار بار بازدید - 11 ماه پیش - Eesha ninna charana bhajane (
Eesha ninna charana bhajane ( Keshava Nama)
written by Shri Kanakadasaru

Vocals
Smt Shilpa Sunil
Smt Saai Arathy Ravikumar
‪@saaiarathyravikumar9699‬

Video Editing
Shilpa Sunil

Video credits
YouTube copyright Free videos

ಈಶ ನಿನ್ನ ಚರಣ ಭಜನೆ
ಆಶೆಯಿಂದ ಮಾಡುವೆನು
ದೋಷ ರಾಶಿ ನಾಶಮಾಡೋ
ಶ್ರೀಶ ಕೇಶವ.

ಈಶ ನಿನ್ನ ಚರಣ ಭಜನೆ
ಆಶೆಯಿಂದ ಮಾಡುವೆನು
ದೋಷ ರಾಶಿ ನಾಶಮಾಡೋ
ಶ್ರೀಶ ಕೇಶವ.. ಶ್ರೀಶ ಕೇಶವ

ಶರಣು ಹೊಕ್ಕೆನಯ್ಯ ಎನ್ನ
ಮರಣ ಸಮಯದಲ್ಲಿ ನಿನ್ನ
ಚರಣ ಸ್ಮರಣೆ ಕರುಣಿಸಯ್ಯ
ನಾರಾಯಣ ನಾರಾಯಣ

ಶೋಧಿಸೆನ್ನ ಭವದ ಕಲುಷ
ಭೋಧಿಸಯ್ಯ ಜ್ಞಾನವೆನಗೆ
ಬಾಧಿಸುವ ಯಮನ ಬಾಧೆ
ಬಿಡಿಸು ಮಾಧವಾ.. ಬಿಡಿಸು ಮಾಧವಾ


ಹಿಂದನೇಕ ಯೋನಿಗಳಲಿ
ಬಂದು ಬಂದು ನೊಂದೆನಯ್ಯ
ಇಂದು ಭವದ ಬಂಧ ಬಿಡಿಸು
ತಂದೆ ಗೋವಿಂದಾ ತಂದೆ ಗೋವಿಂದಾ

ಬ್ರಷ್ಟನೆನಿಸಬೇಡ ಕೃಷ್ಣ
ಇಷ್ಟು ಮಾತ್ರ ಬೇಡಿಕೊಂಬೆ
ಶಿಷ್ಟರೊಡನೆ ಇಟ್ಟು
ಕಷ್ಟ ಬಿಡಿಸು ವಿಷ್ಣುವೇ.. ಬಿಡಿಸು ವಿಷ್ಣುವೇ

ಮದನನಯ್ಯ ನಿನ್ನ ಮಹಿಮೆ
ವದನದಲ್ಲಿ ನುಡಿಯುವಂತೆ
ಹೃದಯದೊಳಗೆ ಹುದುಗಿಸಯ್ಯ
ಮಧುಸೂಧನ ಮಧುಸೂಧನ

ಕವಿದುಕೊಂಡು ಇರುವ ಪಾಪ
ಸವೆದು ಪೋಗುವಂತೆ ಮಾಡಿ
ಜವನ ಬಾಧೆಯನ್ನು ಬಿಡಿಸೋ
ಶ್ರೀ ತ್ರಿವಿಕ್ರಮ.. ಶ್ರೀ ತ್ರಿವಿಕ್ರಮ

ಕಾಮಜನಕ ನಿನ್ನ ನಾಮ
ಪ್ರೇಮದಿಂದ ಪಾಡುವಂಥ
ನೇಮವೆನಗೆ ಪಾಲಿಸಯ್ಯ
ಸ್ವಾಮಿ ವಾಮನ ಸ್ವಾಮಿ ವಾಮನ

ಮೊದಲು ನಿನ್ನ ಪಾದಪೂಜೆ
ಒದಗುವಂತೆ ಮಾಡೋ ಎನ್ನ
ಹೃದಯದೊಳಗೆ ಸದನ ಮಾಡೋ
ಮುದದಿ ಶ್ರೀಧರ.. ಮುದದಿ ಶ್ರೀಧರ

ಹುಸಿಯನಾಡಿ ಹೊಟ್ಟೆಹೊರುವ
ವಿಷಯದಲ್ಲಿ ರಸಿಕನೆಂದು
ಹುಸಿಗೆ ಹಾಕದಿರೋ
ಎನ್ನ ಹೃಷಿಕೇಶನೆ ಹೃಷಿಕೇಶನೆ

ಬಿದ್ದು ಭವದನೇಕ ಜನುಮ
ಬದ್ಧನಾಗಿ ಕಲುಷದಿಂದ
ಗೆದ್ದು ಪೋಪ ಬುದ್ಧಿ ತೋರೋ
ಪದ್ಮನಾಭನೆ.. ಪದ್ಮನಾಭನೆ

ಕಾಮ ಕ್ರೋಧ ಬಿಡಿಸಿ ನಿನ್ನ
ನಾಮ ಜಿಹ್ವೆಯೊಳಗೆ ನುಡಿಸೋ
ಶ್ರೀ ಮಹಾನುಭಾವಾನಾದ
ದಾ.ಮೋದರ ದಾ.ಮೋದರ

ಪಂಕಾಜಾಕ್ಷ ನೀನು ಎನ್ನ
ಮಂಕು ಬುದ್ಧಿಯನ್ನು ಬಿಡಿಸಿ
ಕಿಂಕರನ್ನ ಮಾಡಿಕೊಳ್ಳೋ
ಸಂಕರ್ಷಣ..ಸಂಕರ್ಷಣ

ಏಸು ಜನ್ಮ ಬಂದರೇನು
ದಾಸನಲ್ಲವೇನು ನಾನು
ಘಾಸಿ ಮಾಡದಿರು ಇನ್ನು
ವಾಸುದೇವನೆ ವಾಸುದೇವನೆ

ಬುದ್ಧಿ ಶೂನ್ಯನಾಗಿ ಎನ್ನ
ಬದ್ಧಕಾಯ ಕುಹಕಮನವ
ತಿದ್ದಿ ಹೃದಯ ಶುದ್ಧ ಮಾಡೋ
ಪ್ರದ್ಯುಮ್ನನೇ.. ಪ್ರದ್ಯುಮ್ನನೇ

ಜನನಿ ಜನಕ ನೀನೇ ಎಂದು
ನೆನೆವೆನಯ್ಯ ಧೀನಬಂದು
ಎನಗೆ ಮುಕ್ತಿಪಾಲಿಸಿಂದು
ಅನಿರುದ್ಧನೇ ಅನಿ.ರುದ್ಧನೇ

ಹರುಷದಿಂದ ನಿನ್ನ ನಾಮ
ಸ್ಮರಿಸುವಂತೆ ಮಾಡು ನೇಮ
ಇರಿಸು ಚರಣದಲ್ಲಿ ಪ್ರೇಮ
ಪುರುಷೋತ್ತಮ.. ಪುರುಷೋತ್ತಮ

ಸಾಧುಸಂಗ ಕೊಟ್ಟು ನಿನ್ನ
ಪಾದಭಜನೆ ಇತ್ತು ಎನ್ನ
ಭೇದ ಮಾಡಿ ನೋಡದಿರೋ
ಹೇ ಅಧೋಕ್ಷಜ ಹೇ ಅಧೋಕ್ಷಜ

ಚಾರು ಚಾರಣ ತೋರಿ ಎನಗೆ
ಪಾರುಗಾಣಿಸಯ್ಯ ಕೊನೆಗೆ
ಭಾರ ಹಾಕಿರುವೆ ನಿನಗೆ
ನಾರಸಿಂಹನೆ.. ನಾರಸಿಂಹನೆ

ಸಂಚಿತಾದಿ ಪಾಪಗಳು
ಕಿಂಚಿತಾದಿ ಪೀಡೆಗಳು
ಮುಂಚಿತವಾಗಿ ಕಳೆಯಬೇ ಕೊ
ಸ್ವಾಮಿ ಅಚ್ಯುತಾ ಸ್ವಾಮಿ ಅಚ್ಯುತಾ

ಜ್ಞಾನ ಭಕುತಿ ಕೊಟ್ಟು ನಿನ್ನ
ಧ್ಯಾನದಲ್ಲಿ ಇಟ್ಟು ಸದಾ
ಹೀನ ಬುದ್ಧಿ ಬಿಡಿಸೋ ಮುನ್ನ
ಶ್ರೀ ಜನಾರ್ಧನ.. ಶ್ರೀ ಜನಾರ್ಧನ

ಜಪತಪಾನುಷ್ಟಾನವಿಲ್ಲ
ಕುಪಥಗಾಮಿಯಾದ ಎನ್ನ
ಕೃಪೆಯಮಾಡಿ ಕ್ಷಮಿಸಬೇಕೂ
ಹೇ ಉಪೇಂದ್ರನೇ ಹೇ ಉಪೇಂದ್ರನೇ

ಮೊರೆಯ ಇಡುವೆನಯ್ಯ ನಿನಗೆ
ಶರಧಿ ಶಯನ ಶುಭಮತಿಯ
ಇರಿಸೋ ಭಕ್ತರೊಳು ಪರಮ
ಪುರುಷ ಶ್ರೀಹರೆ ಇರಿಸೋ ಶ್ರೀಹರೆ

ಪುಟ್ಟಿಸಲೆ ಬೇಡ ಇನ್ನು
ಪುಟ್ಟಿಸಿದಕೆ ಪಾಲಿಸಿನ್ನು
ಇಷ್ಟು ಮಾತ್ರ ಬೇಡಿಕೊಂಬೆ
ಶ್ರೀ ಕೃಷ್ಣನೇ ಶ್ರೀ ಕೃಷ್ಣನೇ

ಸತ್ಯವಾದ ನಾಮಗಳನು
ನಿತ್ಯದಲ್ಲಿ ಭಜಿಸುವರಿಗೆ
ಅರ್ತಿಯಿಂದ ಸಲಹುತಿರುವ
ಕರ್ತೃ ಕೇಶವ.. ಕರ್ತೃ ಕೇಶವ

ಮರೆಯದಲೆ ಹರಿಯನಾಮ
ಬರೆದು ಓದಿ ಪೇಳುವರಿಗೆ
ಕರೆದು ಮುಕ್ತಿ ಕೊಡುವ
ನೆಲೆಯಾದಿ ಕೇಶವ
ಕರೆದು ಮುಕ್ತಿ ಕೊಡುವ
ನೆಲೆಯಾದಿ ಕೇಶವ
ಆದಿ ಕೇಶವ

ಕರೆದು ಮುಕ್ತಿ ಕೊಡುವ
ನೆಲೆಯಾದಿ ಕೇಶವ
ಆದಿ ಕೇಶವ






#popular #kannadasongs #kannadalyricalvideo #dasara #dasarapadagalu #devotional #soothing #kanakadasaru #isha #spiritual #spirituality #spiritualawakening
11 ماه پیش در تاریخ 1402/05/13 منتشر شده است.
21,112 بـار بازدید شده
... بیشتر