India to America during travel ban | Exploring Luxury Business class | Pandemic travel update

Priya Malger
Priya Malger
360.7 هزار بار بازدید - 3 سال پیش - #usatravelban
#usatravelban #indiatoamerica #Pandemictravel #kannadavlog #businessclass #luxurycabin #Qatarairways

Traveling to India 🇮🇳 | My pandemic travel Story April 12th | Kannada vlog Traveling to India 🇮🇳 | My pandemic t...

Service Apartment in bangalore |  Why we choose this option? 42 ದಿನಕ್ಕೆ ಎಷ್ಟು ಬಾಡಿಗೆ ? ( Late post ) Service Apartment in bangalore |  Why...

India Trip Bag packing complete Information | Travel Guidelines During Pandemic To  India India Trip Bag packing complete Infor...

India Ticket Book ಮಾಡಿ ಆಯ್ತಾ?? | NRI Reaction How it feels |Based on True incident |Kannada vlog India Ticket Book ಮಾಡಿ ಆಯ್ತಾ?? | NRI ...

Gifts For families and friends | India trip shopping haul | Kannada vlog videos | late post Gifts For families and friends | Indi...

My pandemic travel experience | COVID -19 cases ಯಾವ ರೀತಿ ಇದೆ |-3°C Snow Fall video |ಮೊಟ್ಟೆ ಬಿರಿಯಾನಿ My pandemic travel experience | COVID...

ಯಾವಾಗ ನಮ್ಮ ಮಗು ಪ್ಲಾನಿಂಗ್ | My age ?? | My TV unit Price |Pan Cake recipe |Snow ಆದಾಗ ಯಾವ ರೀತಿ ಇರುತ್ತೆ ಯಾವಾಗ ನಮ್ಮ ಮಗು ಪ್ಲಾನಿಂಗ್ | My age ?? ...

My Fridge tour video |ಏಕೆ ನಾನು ಫ್ರಿಡ್ಜ್ ಕಂಟೇನರ್ ಗಳಲ್ಲಿ ಇಡೋದಕ್ಕೆ ಹೋಗಲ್ಲ |which is my favorite snacks My Fridge tour video |ಏಕೆ ನಾನು ಫ್ರಿಡ್...

Happy moments | ನಾವು ಎಲ್ಲಿದ್ದೇವೆ?? | ನಿಮ್ಮ ಶುಭಾಶಯಗಳಿಗೆ ತುಂಬಾ ಧನ್ಯವಾದಗಳು | Kannada vlog Happy moments | ನಾವು ಎಲ್ಲಿದ್ದೇವೆ?? |...

Luxury Hotel Tour Location Las Vegas America 🇺🇸 | shark reef aquarium Tour | ಐಷಾರಾಮಿ ಹೋಟೆಲ್ in USA Luxury Hotel Tour Location Las Vegas ...

1.5 billion Top Luxury Hotel Tour MUST WATCH|ಆಕಾಶಾನ ನಿಜವಾಗ್ಲೂ ಮಾಡಬಹುದಾ?Hotel in America Kannada vlog 1.5 billion Top Luxury Hotel Tour MUS...

Welcome to my Youtube Channel, If you are visiting my Channel first time, please subscribe to my channel and press the bell icon.

ನನ್ನ ಪ್ರೀತಿಯ ಸ್ನೇಹಿತರಿಗೆ ,

ತುಂಬಾ ದಿನದಿಂದ ನೀವೆಲ್ಲರೂ ಕಮೆಂಟ್ ಬಾಕ್ಸಲ್ಲಿ ಕೇಳುತ್ತಿರುವ ಒಂದು ಪ್ರಶ್ನೆಗೆ ನಾನು ಈ ಮೂಲಕ ಉತ್ತರವನ್ನು ಕೊಡಲು ಬಯಸುತ್ತೇನೆ(ಇಂಡಿಯಾ ವಿಡಿಯೋ ಯಾವಾಗ ಹಾಕುತ್ತೀರಾ???). ನೀವೆಲ್ಲರೂ ಕಳೆದ ವಿಡಿಯೋದಲ್ಲಿ ನೋಡಿರಬಹುದು,ನನಗೆ ಇಂಡಿಯಾಗೆ ಬರಲು ತುಂಬಾನೇ ಇಷ್ಟ ಇತ್ತು.ಈ ಸಂದರ್ಭದಲ್ಲಿ ನನಗೆ ಇನ್ನೊಂದು ಕಡೆ ಬೇಜಾರಾಗುತ್ತಿದೆ. ನಾನು ಹೋಗುವ ದಿನ ಎಲ್ಲ ಚೆನ್ನಾಗಿ ಇತ್ತು, ಅಲ್ಲಿಗೆ ಹೋದ ನಂತರ ಕೂಡ ಎಲ್ಲಾನು ಚೆನ್ನಾಗಿತ್ತು. ನಿಮ್ಮೆಲ್ಲರಿಗೂ ತಿಳಿದಂತೆ ನಾವು ಆರು ವಾರಗಳ ಕಾಲ ಇಂಡಿಯಾ ಹೋಗಲು ಬಯಸಿದ್ದೆವು. ಆದರೆ ಮೊದಲ ಎರಡು ವಾರದಲ್ಲಿ ನಾನು ನಮ್ಮ ಫ್ಯಾಮಿಲಿ ಜೊತೆ ಟೈಮ್ ಸ್ಪೆಂಡ್ ಮಾಡಲು ಅಂದುಕೊಂಡಿದ್ದೆ. ಹಾಗಾಗಿ ನಾನು ಯಾವುದೇ ರೀತಿಯ ವಿಡಿಯೋಗಳನ್ನು ಶೂಟ್ ಮಾಡಲು ಹೋಗಲಿಲ್ಲ ನಿಮಗೆ ತಿಳಿದಿರುವಂತೆ ಒಂದು ವಿಡಿಯೋ ಮಾಡಲು ತುಂಬಾ ಸಮಯ ಬೇಕಾಗುತ್ತದೆ, ನಾನು ವಿಡಿಯೋ ಮಾಡಲು ನನ್ನ ಸಮಯವನ್ನು ಬಿಟ್ಟರೆ ನನ್ನ ಫ್ಯಾಮಿಲಿ ಜೊತೆ ಟೈಮ್ ಸ್ಪೆಂಡ್ ಮಾಡುವುದು ಕಡಿಮೆಯೆನಿಸುತ್ತದೆ. ನಾನು ಎರಡು ವಾರಗಳ ಕಾಲ ವಿಡಿಯೋ ಮಾಡಬಾರದೆಂದು ನಿರ್ಧಾರ ಮಾಡಿದ್ದೆ. ನಮ್ಮ ಭಾರತ ದೇಶದಲ್ಲಿ ಎರಡು ವಾರದಲ್ಲಿ ಎಷ್ಟೊಂದು ಬದಲಾವಣೆಗಳು ಉಂಟಾದವು.ಇದರ ಮಧ್ಯೆ ನಾನು ವಿಡಿಯೋ ಮಾಡಲು ನನ್ನ ಮನಸ್ಸು ಒಪ್ಪಲಿಲ್ಲ.ಎಷ್ಟೊಂದು ಸಾವು-ನೋವಿನ ಸುದ್ದಿಗಳನ್ನು ಕೇಳಿ ನನ್ನ ಮನ ನೊಂದಿತ್ತು. ನೀವೆಲ್ಲರೂ ನನ್ನ ಇಂಡಿಯಾ ವೀಡಿಯೋ ನೋಡಲು ತುಂಬಾನೇ ಇಷ್ಟಪಡುತ್ತೀರಿ,ನಮ್ಮ ಸಂಬಂಧಿಕರನ್ನು ನೋಡಲು ತುಂಬಾನೇ ಬಯಸುತ್ತಿದ್ದೀರಿ ಎಂದು, ಆದರೆ ಪರಿಸ್ಥಿತಿ ಸರಿ ಇರದ ಕಾರಣ ,ನಾನು ವಿಡಿಯೋ ಮಾಡಲು ಆಗಲಿಲ್ಲ. ನಿಮ್ಮೆಲ್ಲರಿಗೂ ಇದು ಅರ್ಥ ಆಗಿದೆ ಎಂದು ಬಯಸುತ್ತೇನೆ,ಯಾರು ಬೇಜಾರು ಮಾಡಿಕೊಳ್ಳಬೇಡಿ.

ಹಾಗೆ ಇನ್ನೊಂದು ನಿಮಗೆ ಕುತೂಹಲ ಇರುವುದು (ನಾನು ಏಕೆ
ಏರ್ಪೋರ್ಟಿನಿಂದ ನಮ್ಮ ಮನೆಗೆ ಹೋಗಲಿಲ್ಲ ಎಂದು?) ಕೋವಿಡ್-19 ಎಷ್ಟು ಡೇಂಜರ್ ಅಂತ ನಮ್ಮೆಲ್ಲರಿಗೂ ಗೊತ್ತು, ನಾವು Airport ತಲುಪಿದಾಗ ಅವರು ನಮಗೇನು quarantine ಆಗಿ ಎಂದು ಹೇಳಲಿಲ್ಲ, Self Quarantine ಮಾಡಿಕೊಳ್ಳಲು ನಿರ್ಧಾರ ಮಾಡಿದೆವು. ನಮ್ಮಿಂದ ನಮ್ಮ ಪ್ರೀತಿ ಪಾತ್ರರಿಗೆ ಯಾವುದೇ ತೊಂದರೆ ಆಗಬಾರದೆಂದು ಬಯಸಿ, ನಾವು ಏರ್ಪೋರ್ಟ್ ಇಂದ ನಮ್ಮ ಮನೆಗೆ ಡೈರೆಕ್ಟಾಗಿ ಹೋಗಲಿಲ್ಲ. ಸ್ವಲ್ಪ ದಿನ ಕಳೆದ ಬಳಿಕ ನಾವು ನಮ್ಮ ಊರಿಗೆ ಹೋದೆವು. ನಿಮಗೆಲ್ಲರಿಗೂ ತಿಳಿದಿರುವಂತೆ ನಿಮಗೆ ಬೆಳಿಗ್ಗೆ ಇದ್ದಾಗ ನಮಗೆ ರಾತ್ರಿ ಇರುತ್ತದೆ.ನಮಗೆ ರಾತ್ರಿ ಇದ್ದಾಗ ನಿಮಗೆ ಬೆಳಗ್ಗೆ ಇರುತ್ತದೆ. ಬದಲಾವಣೆಯಿಂದ ನಮಗೆ ಹೊಂದಿಕೊಳ್ಳಲು ಒಂದು ವಾರ ಸಮಯ ಬೇಕಾಗುತ್ತದೆ. ಅದಕ್ಕಾಗಿಯೇ ವಿಡಿಯೋ ಮಾಡಲು ನನಗೆ ಆಗುತ್ತಿರಲಿಲ್ಲ. ಇನ್ನು ಕೆಲವು ಸಂಬಂಧಿಕರನ್ನು ಮೀಟ್ ಮಾಡಲು ಆಗಲೇ ಇಲ್ಲ,ಅದು ಕೂಡ ನನಗೆ ತುಂಬಾನೇ ನೋವುಂಟುಮಾಡಿದೆ.

ನಿಮ್ಮೆಲ್ಲರಿಗೂ ವಿಷಯ ತಿಳಿದಿದೆ ಎಂದು ಅಂದುಕೊಂಡಿದ್ದೇನೆ, ಅಮೇರಿಕಾ Travel Ban ಮಾಡಿದೆ. ನಾವು ಮೇ 4ರ ಒಳಗೆ USA ಬರಬೇಕಾಗಿತ್ತು.ಹಾಗಾಗಿ ನಾವು ಮೂರನೇ ವಾರ ಇದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡು ಹೊರಟೆವು. ನಾನು ಯಾವುದೇ ತರಹದ ವಿಡಿಯೋಗಳನ್ನು ಮಾಡಲು ಆಗಲಿಲ್ಲ, ನನಗೂ ಕೂಡ ಬೇಜಾರಾಗಿದೆ. ಪರಿಸ್ಥಿತಿ ನಿಮ್ಮೆಲ್ಲರಿಗೂ ತಿಳಿದಿದೆ ಎಂದು ಅಂದುಕೊಂಡಿದ್ದೇನೆ.

ಎಲ್ಲರೂ ಈ ಕ್ಷಣ ಒಂದಾಗಿ ನಿಂತು, ನಮ್ಮ ಭಾರತ ದೇಶದಲ್ಲಿ ನಡೆಯುತ್ತಿರುವ  ಬೆಂಕಿನ ಆದಷ್ಟು ಬೇಗ ಆರಿಸೋಣ .ಎಷ್ಟು ಜನ ಕಷ್ಟ ಪಡುತ್ತಿರುವುದು ,ಎಷ್ಟೊಂದು ಸಾವಿರಾರು ಜನ ಸಾಯುತ್ತಿರುವುದು ,ಅದನ್ನು ನೋಡಿ ನನ್ನ ಮನಸ್ಸಿಗೆ ತುಂಬಾನೇ ನೋವಾಗಿದೆ.

ನನಗೆ ಸ್ವಲ್ಪ ನೆಮ್ಮದಿಯ ವಿಷಯ ಎಂದರೆ, ನಾನು ಮೂರು ವಾರಗಳ ಕಾಲ ನನ್ನ ಫ್ಯಾಮಿಲಿ ಜೊತೆ ಕಳೆದ ಖುಷಿ ಕ್ಷಣಗಳು ನನಗೆ ತೃಪ್ತಿಯನ್ನು  ತಂದುಕೊಟ್ಟಿದೆ. ನೀವೆಲ್ಲರೂ ನನ್ನ ಖುಷಿನಾ ಬಯಸಿದ್ದೀರಿ ಎಂದು ನಾನು ತಿಳಿಯುತ್ತೇನೆ.

ನಿಮ್ಮ ಪ್ರೀತಿ-ವಿಶ್ವಾಸದಿಂದ , ಇಂಡಿಯಾಗೆ ಪ್ರಯಾಣ ಮಾಡಿದ ಉದ್ದೇಶಗಳು ಎಲ್ಲಾನು ಪೂರ್ಣವಾಗಿ ಮುಗಿಸಿಕೊಂಡು, ನಾನು ಸುರಕ್ಷಿತವಾಗಿ ಅಮೇರಿಕಾಕ್ಕೆ ಬಂದು ತಲುಪಿದ್ದೇನೆ. ಆದಷ್ಟು ಬೇಗ ವಿಡಿಯೋ ಜೊತೆ Meet ಆಗುತ್ತೇನೆ. Time ಬದಲಾವಣೆ ಆಗಿರುವುದರಿಂದ ನಾನು ಇಲ್ಲಿನ Time ಗೆ ಹೊಂದಿಕೊಳ್ಳಲು, ನನಗೆ ಒಂದು ವಾರ ಬೇಕಾಗುತ್ತದೆ.ಹಾಗಾಗಿ ನನಗೆ ಯಾವುದೇ ಇತರ ಉತ್ತರಗಳನ್ನು ಕೊಡಲು ಆಗುತ್ತಿಲ್ಲ. ಆದಷ್ಟು ಬೇಗ ನಿಮ್ಮನ್ನು ಮೀಟ್ ಮಾಡುತ್ತೇನೆ.

ಮುಂದಿನ ವಿಡಿಯೋದಲ್ಲಿ ನನ್ನ ಸಂಪೂರ್ಣ ಅಭಿಪ್ರಾಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.

ಇಂತಿ ನಿಮ್ಮ ಪ್ರೀತಿಯ ಪ್ರಿಯ...
3 سال پیش در تاریخ 1400/02/22 منتشر شده است.
360,781 بـار بازدید شده
... بیشتر