ಜೀರಾ ರೈಸ್ & ದಾಲ್ ತಡ್ಕಾ 100% ಹೋಟೆಲ್ ಮತ್ತು ರೆಸ್ಟೋರೆಂಟ್ ಶೈಲಿಯಲ್ಲಿ ಮಾಡುವ ವಿಧಾನ I Jeera Rice & Dal Tadka

Bhagya Tv
Bhagya Tv
537.7 هزار بار بازدید - 3 سال پیش - Jeera rice and Dal tadka
Jeera rice and Dal tadka
Jeera rice is North India’s famous recipe. North Indians make this dish for everyday meals. Nowadays In South India also this dish became very famous. Today we are going to show how to make Jeera rice and Dal Tadka.
Ingredients
For Jeera rice
• Jeera rice/Normal rice – 2 cups
• Onion – 2
• Ghee – 4 tbsp.
• Cashew – 15
• Green chillies – 10
• Cumin – 1 tbsp.
• White pepper powder – 1 tbsp.
• Oil – 1 tsp.
• Salt – as per taste
Dal Tadka
• Toor dal – 1 cup
• Onions – 2
• Tomato – 1
• Oil – 4 tbsp.
• Green Chilli- 6
• Ginger Garlic paste – 1 tbsp,
• Coriander powder – 1 tbsp.
• Garam masala powder – 1 tbsp.
• Kasuri methi – 1 tbsp.
• Turmeric – ½ tsp.
• Salt – as per taste
For Tempering
• Oil – 1 tsp.
• Mustard – 1 tsp
• Curry leaves – 1 stem
• Byadgi red chilli – 2
Preparation method
1. Add rice, water, little bit of oil to cooker and mix them, close a lid and pressure cook it for 2 whistles
2. Heat a ghee in Kadai, fry the cashews for few minutes and keep it aside
3. Add Cumin seeds, green chillies to same ghee and roast for 30 seconds
4. Add chopped onions, little bit salt and roast for 4 minutes
5. Add rice and white pepper powder, fried cashews and mix well
6. To make Dal fry, add 2 cups water to cooker and let it boil, wash the Toor dal and add with boiled water, add little bit oil and turmeric, mix well, close a lid and pressure cook it for 3 whistles
7. Open cooker lid after cooldown, mash the cooked dal and add one glass water and mix well
8. Heat an oil in Kadai add Cumin, Kasuri methi, chopped green chillies, onion and fry them
9. Add Ginger and garlic paste, fry them for few seconds, add chopped tomato, salt and fry them
10. Then Add Garam masala powder, Coriander powder mix them, add cooked dal mix and cook again for 5 minutes on medium flame
11. For tempering heat oil In Kadai, add mustard, Asafoetida, Bydagi red chilli, Curry leaves and roast them for 30 seconds, add this tempering with Dal mix
12. Serve Jeera rice along with Dal Tadka
Note:
• Jeera rice is best to make this Dish Than normal rice
• Rice should be Non sticky to prepare Jeera rice
• Dal Tadka should be in thick consistency, so do not add more water

ಜೀರಾ ರೈಸ್ ಹಾಗೂ ದಾಲ್ ತಡ್ಕಾ
ಜೀರಾ ರೈಸ್, ಉತ್ತರ ಭಾರತದ ಖ್ಯಾತ ರೆಸಿಪಿಗಳಲ್ಲಿ ಒಂದು. ಉತ್ತರ ಭಾರತೀಯರು ಪ್ರತಿದಿನ ಬಳಸುವ ಜೀರಾ ರೈಸ್ ಈಗ ದಕ್ಷಿಣ ಭಾರತದಲ್ಲಿ ಕೂಡಾ ಹೆಚ್ಚು ತಯಾರಿಸಲಾಗುತ್ತದೆ. ಇಂದು ನಾವು ಜೀರಾ ರೈಸ್ ಹಾಗೂ ಅದರೊಂದಿಗೆ ಕಾಂಬಿನೇಷನ್ ಆಗಿರುವ ದಾಲ್ ತಡ್ಕಾ ಮಾಡುವುದು ಹೇಗೆ ಎಂಬುದನ್ನು ಕಲಿಯೋಣ.
ಬೇಕಾಗುವ ಸಾಮಗ್ರಿಗಳು
ಜೀರಾ ರೈಸ್
• ಜೀರಾ ರೈಸ್/ಊಟದ ಅಕ್ಕಿ – 2 ಕಪ್
• ಈರುಳ್ಳಿ -2
• ತುಪ್ಪ – 4 tbsp.
• ಗೋಡಂಬಿ – 15
• ಹಸಿ ಮೆಣಸಿನಕಾಯಿ – 10
• ಜೀರ್ಗೆ -1 tbsp.
• ಬಿಳಿ ಮೆಣಸಿನಪುಡಿ – 1 tbsp.
• ಎಣ್ಣೆ – 1 tsp.
• ಉಪ್ಪು – ರುಚಿಗೆ ತಕ್ಕಷ್ಟು

ದಾಲ್ ತಡ್ಕಾ
• ತೊಗರಿ ಬೇಳೆ – 1 ಕಪ್
• ಈರುಳ್ಳಿ – 2
• ಟೊಮ್ಯಾಟೋ – 1
• ಎಣ್ಣೆ – 4 tbsp.
• ಹಸಿ ಮೆಣಸಿನಕಾಯಿ – 6
• ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 tbsp.
• ಧನಿಯಾ ಪುಡಿ – 1 tbsp.
• ಗರಂ ಮಸಾಲ ಪುಡಿ – 1 tbsp.
• ಕಸೂರಿ ಮೇಥಿ – tbsp.
• ಅರಿಶಿನ –  ½ tsp.
• ಉಪ್ಪು – ರುಚಿಗೆ
ಒಗ್ಗರಣೆಗೆ
• ಎಣ್ಣೆ – 1 tsp.
• ಸಾಸಿವೆ – 1 tsp
• ಕರಿಬೇವು – 1 ಎಸಳು
• ಬ್ಯಾಡಗಿ ಮೆಣಸಿನಕಾಯಿ – 2
ತಯಾರಿಸುವ ವಿಧಾನ
1. ಒಂದು ಕುಕ್ಕರ್ನಲ್ಲಿ ಅಕ್ಕಿ, ನೀರು, ಸ್ವಲ್ಪ ಉಪ್ಪು, ಸ್ವಲ್ಪ ಎಣ್ಣೆ ಸೇರಿಸಿ ಒಮ್ಮೆ ಬೆರೆಸಿ 2 ಸೀಟಿ ಕೂಗಿಸಿಕೊಂಡು ಉದುರಾಗಿ ಅನ್ನ ತಯಾರಿಸಿಕೊಳ್ಳಿ
2. ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿಕೊಂಡು ಗೋಡಂಬಿ ಸೇರಿಸಿ ಕಡಿಮೆ ಉರಿಯಲ್ಲಿ ಹುರಿದುಕೊಂಡು ಪಕ್ಕಕ್ಕೆ ತೆಗೆದಿಡಿ
3. ಅದೇ ತುಪ್ಪದೊಂದಿಗೆ ಜೀರ್ಗೆ, ಸೀಳಿಕೊಂಡ ಹಸಿಮೆಣಸಿನಕಾಯಿ ಸೇರಿಸಿ 30 ಸೆಕೆಂಡ್ ಹುರಿದುಕೊಳ್ಳಿ
4. ನಂತರ ಹೆಚ್ಚಿದ ಈರುಳ್ಳಿ, ಸ್ವಲ್ಪ ಉಪ್ಪು ಸೇರಿಸಿ 4 ನಿಮಿಷ ಕಡಿಮೆ ಉರಿಯಲ್ಲಿ ಹುರಿದುಕೊಳ್ಳಿ
5. ಇದರೊಂದಿಗೆ ಅನ್ನ, ಬಿಳಿ ಮೆಣಸಿನ ಪುಡಿ, ಹುರಿದುಕೊಂಡ ಗೋಡಂಬಿ ಸೇರಿಸಿ ಮಿಕ್ಸ್ ಮಾಡಿದರೆ ಜೀರಾ ರೈಸ್ ರೆಡಿ
6. ದಾಲ್ ಫ್ರೈ ಮಾಡಲು ಒಂದು ಕುಕ್ಕರ್ನಲ್ಲಿ 2 ಕಪ್ ನೀರು ಸೇರಿಸಿ ಕುದಿಯಲು ಬಿಡಿ, ನಂತರ ತೊಳೆದ ತೊಗರಿ ಬೇಳೆ, ಅರಿಶಿನ, ಸ್ವಲ್ಪ ಎಣ್ಣೆ ಸೇರಿಸಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ 3 ಸೀಟಿ ಕೂಗಿಸಿಕೊಳ್ಳಿ
7. ಬೇಯಿಸಿಕೊಂಡ ತೊಗರಿಬೇಳೆಯನ್ನು ಚೆನ್ನಾಗಿ ಮ್ಯಾಷ್ ಮಾಡಿ, 1ಕಪ್ ನೀರು ಸೇರಿಸಿ ಮಿಕ್ಸ್ ಮಾಡಿ
8. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಜೀರ್ಗೆ, ಕಸೂರಿ ಮೇಥಿ, ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, ಹೆಚ್ಚಿದ ಈರುಳ್ಳಿ ಸೇರಿಸಿ 4 ನಿಮಿಷ ಫ್ರೈ ಮಾಡಿಕೊಳ್ಳಿ
9. ಇದರೊಂದಿಗೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವರೆಗೂ ಹುರಿಯಿರಿ, ನಂತರ ಹೆಚ್ಚಿದ ಟೊಮ್ಯಾಟೋ, ಸ್ವಲ್ಪ ಉಪ್ಪು ಸೇರಿಸಿ ಮೃದುವಾಗುವರೆಗೂ ಹುರಿಯಿರಿ
10. ನಂತರ ಗರಂ ಮಸಾಲೆ ಪುಡಿ, ಧನಿಯಾ ಪುಡಿ ಸೇರಿಸಿ ಮಿಕ್ಸ್ ಮಾಡಿ ಬೇಯಿಸಿಕೊಂಡ ಬೇಳೆ ಸೇರಿಸಿ ಮಿಕ್ಸ್ ಮಾಡಿ 5 ನಿಮಿಷ ಕಡಿಮೆ ಉರಿಯಲ್ಲಿ ಕುದಿಸಿಕೊಳ್ಳಿ
11. ದಾಲ್ ಫ್ರೈಗೆ ಒಗ್ಗರಣೆ ಮಾಡಲು ಪುಟ್ಟ ಬಾಣಲೆಯೊಂದರಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಸಾಸಿವೆ, ಹಿಂಗು, ಬ್ಯಾಡಗಿ ಮೆಣಸಿನಕಾಯಿ, ಕರಿಬೇವು ಸೇರಿಸಿ 30 ಸೆಕೆಂಡ್ಗಳ ಕಾಲ ಹುರಿದು ದಾಲ್ ಫ್ರೈ ಜೊತೆ ಸೇರಿಸಿ ಮಿಕ್ಸ್ ಮಾಡಿ
12. ಜೀರಾ ರೈಸನ್ನು ದಾಲ್ ತಡ್ಕಾ ಜೊತೆ ಸರ್ವ್ ಮಾಡಿ
ಸೂಚನೆ: ಈ ರೆಸಿಪಿ ಮಾಡಲು ಆದಷ್ಟು ಜೀರಾ ರೈಸ್ ಬಳಸಲು ಪ್ರಯತ್ನಿಸಿ
ದಾಲ್ ತಡ್ಕಾಗೆ ಹೆಚ್ಚು ನೀರು ಸೇರಿಸದೆ ಆದಷ್ಟು ಗಟ್ಟಿಯಾಗಿ ಮಾಡಿದರೆ ಅದು ಜೀರಾ ರೈಸ್ಗೆ ಬೆಸ್ಟ್ ಕಾಂಬಿನೇಷನ್



#BhagyaTvRecipes #bhagyaTV #BhagyaTvKannada

Bhagya tv vlogs channel :
@bhagyatvvlogs

BHAGYA TV
https://www.seevid.ir/c/bhagyatv?su...
#BhagyaTvRecipes #bhagyaTV #BhagyaTvKannada

Bhagya tv vlogs channel :
@bhagyatvvlogs

BHAGYA TV
https://www.seevid.ir/c/bhagyatv?su...
3 سال پیش در تاریخ 1400/06/25 منتشر شده است.
537,729 بـار بازدید شده
... بیشتر