ಸಾವರಿನ್ ಗೋಲ್ಡ್ ಬಾಂಡ್‌ ನ ಮೇಲೆ ವೀಡಿಯೊ ಸ್ಕ್ರಿಪ್ಟ್ | Sovereign Gold Bonds | Kannada | HDFC Securities

HDFC securities
HDFC securities
4.8 هزار بار بازدید - 3 سال پیش - ಸಾವರಿನ್ ಗೋಲ್ಡ್ ಬಾಂಡ್‌ಗಳು ಅಥವಾ SGBಗಳು
ಸಾವರಿನ್ ಗೋಲ್ಡ್ ಬಾಂಡ್‌ಗಳು ಅಥವಾ SGBಗಳು ಭಾರತ ಸರ್ಕಾರದ ಪರವಾಗಿ RBI ನೀಡುವ ಸರ್ಕಾರಿ ಸೆಕ್ಯುರಿಟೀಸ್ ಆಗಿರುತ್ತದೆ. ಇದು ಭೌತಿಕ ಅಥವಾ ಡಿಜಿಟಲ್ ಪ್ರಮಾಣಪತ್ರದ ರೂಪದಲ್ಲಿ ಚಿನ್ನವನ್ನು ಹೊಂದುವ ಪರ್ಯಾಯ ಮಾರ್ಗವಾಗಿದೆ. ನೀವು SGBಗಳ ಬಗ್ಗೆ ತಿಳಿದುಕೊಳ್ಳಬೇಕಾದ 7 ವಿಷಯಗಳು ಇಲ್ಲಿವೆ.
SGBಗಳು ಕಡಿಮೆ ಅಪಾಯ ಮತ್ತು ಸುರಕ್ಷಿತ ಹೂಡಿಕೆಯಾಗಿದ್ದು, ದ್ವಿತೀಯ ಮಾರುಕಟ್ಟೆಯಲ್ಲಿ ಸುಲಭವಾಗಿ ವ್ಯಾಪಾರವಾಗುತ್ತವೆ.
ಅವುಗಳ ಮೌಲ್ಯವನ್ನು ಗ್ರಾಂ ಚಿನ್ನದಲ್ಲಿ ಸೂಚಿಸಲಾಗುತ್ತದೆ.
ಇಂಡಿಯನ್ ಬುಲಿಯನ್ ಎಂಡ್ ಜ್ಯುವೆಲ್ಲರ್ಸ್ ಅಸೋಸಿಯೇಷನ್ ಲಿಮಿಟೆಡ್ ಒದಗಿಸಿದ 999 ಶುದ್ಧತೆಯ ಚಿನ್ನದ 3 ದಿನಗಳ ಸರಾಸರಿ ಕ್ಲೋಸಿಂಗ್ ಪ್ರೈಸ್ ನ ಮೇಲೆ SGBಯ ವಿತರಣಾ ಬೆಲೆಯನ್ನು ಲೆಕ್ಕಹಾಕಲಾಗುವುದು.
ಅವು ಕನಿಷ್ಟ 8 ವರ್ಷಗಳ ಹೂಡಿಕೆಯ ಅವಧಿಯೊಂದಿಗೆ ಬರುತ್ತವೆ, ಮೊದಲ 5 ವರ್ಷಗಳಲ್ಲಿ ಯಾವುದೇ ಅಕಾಲಿಕ ಹಿಂಪಡೆಯುವಿಕೆಗೆ ಅವಕಾಶವಿಲ್ಲ. ಹೂಡಿಕೆದಾರರು ಈ ಬಾಂಡ್‌ಗಳನ್ನು ದ್ವಿತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು.
SGB ಮೇಲೆ ಹೂಡಿಕೆದಾರರಿಗೆ ವಾರ್ಷಿಕ 2.5% ಬಡ್ಡಿ ಮತ್ತು ಅರೆ-ವಾರ್ಷಿಕ ಪೇ- ಔಟ್ ಗಳು ದೊರೆಯುತ್ತವೆ.
ಮೆಚ್ಯುರಿಟಿಯ ಮೊದಲು ಬಾಂಡ್ ಅನ್ನು ವರ್ಗಾಯಿಸುವಾಗ ಸೂಚ್ಯಂಕ ಪ್ರಯೋಜನಗಳು ಅನ್ವಯಿಸುತ್ತವೆ.
ಎಸ್‌ಜಿಬಿಗಳಲ್ಲಿ ನಿವಾಸಿ ಭಾರತೀಯ ವ್ಯಕ್ತಿ, HUF, ಟ್ರಸ್ಟ್, ಚಾರಿಟಿ ಅಥವಾ ವಿಶ್ವವಿದ್ಯಾಲಯವು ಹೂಡಿಕೆ ಮಾಡಬಹುದು. ಅನುಮತಿಸಲಾದ ಕನಿಷ್ಠ ಮತ್ತು ಗರಿಷ್ಠ ಚಂದಾದಾರಿಕೆ ಪ್ರಮಾಣ ಕ್ರಮವಾಗಿ 1 ಗ್ರಾಂ ಮತ್ತು 4 ಕೆಜಿ.
ಆದ್ದರಿಂದ, ಚಿನ್ನವನ್ನು ಸ್ಮಾರ್ಟ್ ಆಗಿ ಸಾವರಿನ್ ಗೋಲ್ಡ್  ಬಾಂಡ್‌ಗಳಲ್ಲಿ ಹೂಡಿಕೆ ಮಾಡಿ.
#HDFCSecurities #SGB
3 سال پیش در تاریخ 1400/02/17 منتشر شده است.
4,839 بـار بازدید شده
... بیشتر